ಶ್ರವಣ ದೋಷ – ತುಟಿ ಚಲನೆಯನ್ನು ಗಮನಿಸಿ ಮಾತನಾಡುವರ ಸಮಸ್ಯೆಗಳು.
೧. ಉಬ್ಬು ಅಥವ ಸೊಟ್ಟ ಹಲ್ಲಿನವರು ಮಾತನಾಡಿದರೆ ಅರ್ಥೈಸಲು ಕಷ್ಟ.
೨. ವೇಗವಾಗಿ(fast) ಮಾತನಾಡಿದರೆ ಕಷ್ಟ
೩. ಹೊಸಬರು ಮಾತನಾಡುವುದನ್ನು ಅರ್ಥೈಸುವುದು ಕಷ್ಟ. ಅವರು ಮಾತನಾಡುವ ರೀತಿ ತಿಳಿದುಕೊಳ್ಳಬೇಕಾಗುತ್ತದೆ. ಸ್ವಲ್ಪ ಅಭ್ಯಾಸವಾದ (ರೂಡಿಯಾದ ಮೇಲೆ) ಅರ್ಥವಾಗುತ್ತದೆ.
೪. ಜನರು ಮಾತನಾಡುವಾಗ ಮುಖ ತಿರುಗಿಸುತ್ತಿರುತ್ತಾರೆ ಅಥವ ತಲೆ ತಗ್ಗಿಸುವುದು, ಎತ್ತುವುದನ್ನು ಮಾಡುತ್ತಿರುತ್ತಾರೆ. ಮುಖದ ಒಂದು ಪಾರ್ಶ್ವದಿಂದ ಮಾತ್ರ ನೋಡಿದರೆ ಅರ್ಥೈಸಲು ಕಷ್ಟ.
೫. ಕೆಲವರು ಹಲವು ಭಾಷೆಗಳನ್ನು ಬೆರೆಸಿ ಮಾತನಾಡುತ್ತಾರೆ. ಆಗಲೂ ಕಷ್ಟ.
೬. ಮೀಟಿಂಗ್ ನಡೆಯವಾಗ ನಡೆಯುವ cross ಮಾತುಕತೆಗಳು ಅರ್ಥವಾಗುವುದಿಲ್ಲ.
೭ ಮಾತನಾಡುವ ರೀತಿಯಲ್ಲಿ ವ್ಯತ್ಯಾಸ. ಅಂದರೆ ತುಟಿ ಹೊರಳಿಸುವ ರೀತಿ. ಮುಂದಿನವರು ಬಾಯಲ್ಲಿ ಎಂಜಲು ತುಂಬಿಕೊಂಡು ಮಾತನಾಡಿದರೆ ಅರ್ಥವಾಗುವುದು ಕಷ್ಟ.
೮. ಮಾತನಾಡುವವರ ಎತ್ತರದಲ್ಲಿ ಅಂತರ. ಕೋನ ವ್ಯತ್ಯಾಸ. Eye contact level ಸರಿಯಾಗಿರಬೇಕು.
೯. ಇಬ್ಬರ ನಡುವಿನ ಅಂತರ
೧೦. ಸದಾ ಜಾಗ್ರತೆ ಇರಬೇಕಾಗುತ್ತದೆ.
೧೧. ಕೆಲವು ಅಕ್ಷರಗಳು confuse ಆಗುತ್ತವೆ. ಕೆಲವು ಅಕ್ಷರಗಳು ಒಂದೇ ತರಹ ಕಾಣುತ್ತವೆ. (ಆನೆ – ಆಲೆ – ಆಲೆಮನೆ ಎಂದು ಹೇಳಬೇಕಾದರೆ)
೧೨. ಕೆಳಗಿನ ಅಕ್ಷರಗಳ ಗುಂಪು ಒಂದೇ ತರಹ ಕಾಣುತ್ತದೆ.
ಕ ಖ ಗ ಘ ಚ ಛ ಜ ಝ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ
ಚ ಸ ಶ ಷ
ಸ್ವಲ್ಪ ಮಟ್ಟಿಗೆ ‘ಯ’ ಮತ್ತು ‘ಅ(ಆ)’
ಅ ಆ – ಇ ಈ – ಉ ಊ – ಎ ಏ – ಒ ಓ ಅಂದರೆ ಹ್ರಸ್ವ ಸ್ವರ ಧೀರ್ಘ ಸ್ವರಗಳ ವ್ಯತ್ಯಾಸ ಗುರುತಿಸುವುದು ಕಷ್ಟ.
ಇಂಗ್ಲಿಷ್ ಭಾಷೆಯಲ್ಲಿ ಈ ರೀತಿ ಇದೆ.
P B, N L, E D T, H S X, Q U, G J C, A K, V Y.
೧೩. ಪದಗಳಲ್ಲಿ ಹೆಚ್ಚು ಅಕ್ಷರಗಳಿದ್ದರೆ ಕಷ್ಟವಾಗುತ್ತದೆ.
೧೪. ಒಂದು ಪದದಲ್ಲಿ ಒಂದು ಅಕ್ಷರ ಹಲವು ಸಲ ಪುನರಾವರ್ತನೆ ಆದರೆ ಗೊಂದಲವಾಗುತ್ತದೆ.
೧೫.ಇಂಗ್ಲೀಷ್ ಭಾಷೆಯ ಉಚ್ಚಾರಣೆ (Pronunciation) ಅನುಸರಿಸುವುದು ಕಷ್ಟ.
೧೬. ಮೀಸೆ, ತುಟಿಗಳ ರಚನೆ (ದಪ್ಪ ತುಟಿಯವರು, ಸಣ್ಣ ತುಟಿಯವರು) ಹಲ್ಲು ಇಲ್ಲದವರ ಮಾತು ಅರ್ಥವಾಗಲ್ಲ.
೧೭. ಮಾತನಾಡಬೇಕಾದರೆ ಮಾತನಾಡುವವರ ಮುಖದ ಮೇಲೆ ಬೆಳಕು ಬೀಳುತ್ತಿರಬೇಕು. ಬೆಳಕು ನೆರಳಿನಿಂದಾಗಿ ಮೊಬೈಲ್ ನಲ್ಲಿ (ವಿಡಿಯೋ ಕಾಲ್) ಸಮಸ್ಯೆ ಎದುರಿಸಬೇಕಾಗುತ್ತದೆ.
೧೮. ಗೊತ್ತಿಲ್ಲದ ಹೊಸ ಪದಗಳನ್ನು ಬಳಸಿದಾಗ ಗೊಂದಲ ಉಂಟಾಗುತ್ತದೆ.
ಅರ್ಚನಾ ಎಂ ಹೇಳಿರುವಂತೆ
0 Comments