ಕರ್ನಾಟಕ ಸರ್ಕಾರ
ಸಾರ್ವಜನಿಕ ಶಿಕ್ಷಣ ಇಲಾಖೆ
ಬೆಂಗಳೂರು ಗ್ರಾಮಾಂತರ
ಸಮನ್ವಯ ಶಿಕ್ಷಣ ನೀತಿ
(Inclusive Education Policy)
೧೦ ದಿನಗಳ ಕಾರ್ಯಾಗಾರ.
ವರದಿ
ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತಾಲ್ಲೂಕುಕೇಂದ್ರಗಳಾದ ದೊಡ್ಡಬಳ್ಳಾಪುರದಲ್ಲಿ ಹಾಗೂ ಹೊಸಕೋಟೆಯಲ್ಲಿ, ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಸಮನ್ವಯ ಶಿಕ್ಷಣ ನೀತಿ’ (Inclusive Education policy) ಯ ಅನ್ವಯ ಪ್ರಾಥಮಿಕ ಶಾಲಾ ಶಿಕ್ಷಕರಿಗೆ(೧ ರಿಂದ ೮ ನೇ ತರಗತಿಗಳಿಗೆ ಪಾಠ ಮಾಡುವ ಶಿಕ್ಷಕರು) ಅಂಗವಿಕಲರು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಪರಿಹಾರೋಪಾಯಗಳ ಬಗ್ಗೆ ಅರಿವು ಮೂಡಿಸುವ ಹತ್ತು ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ದಿನಾಂಕ ೧೧.೨.೨೦೨೧ ರಂದು ದೊಡ್ಡಬಳ್ಳಾಪುರದಲ್ಲಿ ಹಾಗೂ ೧೩.೨.೨೦೨೧ರಂದು ಹೊಸಕೋಟೆಯಲ್ಲಿ ಶ್ರವಣದೋಷದವರ ಸಮಸ್ಯೆ ಹಾಗೂ ಪರಿಹಾರೋಪಾಯಗಳ ಬಗ್ಗೆ ಕಾರ್ಯಗಾರ ಮೀಸಲಾಗಿದ್ದವು.
ದೊಡ್ಡಬಳ್ಳಾಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪೇರೆಂಟ್ಸ್ ಅಸೋಸಿಯೇಷನ್ ಆಫ್ ಡೆಫ್ ಚಿಲ್ಡ್ರನ್, ಮೈಸೂರು ಇದರ ಸದಸ್ಯರಾಗಿರುವ ಶ್ರೀಮತಿ ರತ್ನಶೆಟ್ಟಿಯವರು ಮುಖ್ಯ ಭಾಷಣಕಾರರಾಗಿದ್ದರು. ಅಂತೆಯೇ ಹೊಸಕೋಟೆಯಲ್ಲಿ ನಡೆದ ಕಾರ್ಯಾಗಾರದಲ್ಲಿ ಇನ್ನೊರ್ವ ಸದಸ್ಯರಾದ ಶ್ರೀ ಮಲ್ಲಿಕಾರ್ಜುನ ರವರು ಮುಖ್ಯ ಭಾಷಣಕಾರರಾಗಿದ್ದರು. ಈ ಇಬ್ಬರು ಸದಸ್ಯರು ಶಿಕ್ಷಕರಿಗೆ ಶ್ರವಣದೋಷ ಇರುವವರ ಸಮಸ್ಯೆ, ಪರಿಹಾರೋಪಾಯ, ಶಿಕ್ಷಣದಲ್ಲಿ ಅನುಸರಿಸಬಹುದಾದ ಪಠ್ಯ ವಿಧಾನ, ಶ್ರವಣೋಪಕರಣಗಳ ಉಪಯೋಗ, ಬೇರೆ ಬೇರೆ ವಿಧದ ಶ್ರವಣದೋಷಗಳು ಅದರಿಂದ ಉಂಟಾಗುವ ಪರಿಣಾಮಗಳು. (Pre lingual and post lingual, congenital and acquired, mild, moderate, severe, profound) ಇನ್ನೂ ಹಲವಾರು ವಿಷಯಗಳ ಬಗ್ಗೆ ಶಿಕ್ಷಕರಲ್ಲಿ ಅರಿವು ಮೂಡಿಸಿ, ಈ ಅರಿವನ್ನು ಸಮಾಜಕ್ಕೂ ತಿಳಿಸಬೇಕೆಂದು ಮನವರಿಕೆ ಮಾಡಿಕೊಟ್ಟರು.
ಶ್ರೀಮತಿ ರತ್ನ ಶೆಟ್ಟಿ ಹಾಗೂ ಶ್ರೀ ಮಲ್ಲಿಕಾರ್ಜುನರವರಿಗೆ ಅಭಿನಂದನೆಗಳು.
0 Comments